ಅನ್ವರ್ ಮಸೂದ್ ಅವರು ಪಂಜಾಬಿ, ಉರ್ದು, ಪರ್ಷಿಯ ಭಾಷೆಯ ಬರಹಗಾರರು. ಇವರ ಬರಹಗಳು ಪಂಜಾಬ್ ನ ಭಾಷೆ ಸಂಸ್ಕೃತಿಯ ಬಗ್ಗೆ ತಿಳಿಸುತ್ತವೆ. ಇವರು ಹಾಸ್ಯ ಕವನ ರಚಿಸುವಲ್ಲಿ ಪ್ರಸಿದ್ಧರು. == ಜನನ == ಮಸೂದ್ ಅವರು ೮ ನವೆಂಬರ್ ೧೯೩೫ ರಂದು ಜನಿಸಿದರು. ಗುಜರಾತ್ ನಲ್ಲಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿ ಕಲಾ ವಿಭಾಗದಲ್ಲಿ ಪದವಿ ಪಡೆದರು. ಪಂಜಾಬ್ ನ ಕುಂಜಾದಲ್ಲಿನ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪರ್ಷಿಯ ಭಾಷೆಯನ್ನು ಕಲಿಸುತ್ತಿದ್ದ ಇವರು ೧೯೬೧ ರಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೬೨ ರಿಂದ ೧೯೯೬ರವರೆಗೆ ಪಂಜಾಬ್ ನ ಹಲವು ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿದ್ದರು. ೧೯೯೬ರಲ್ಲಿ ನಿವೃತ್ತಿ ಹೊಂದಿದರು. == ಪಂಜಾಬಿ ಗ್ರಂಥಗಳು == ಮಿಲಾ ಅಖ್ಯಾನ್ ದ ಹೂ ಕಿ ಕರ್ಯಯ್ ಬನ್ಯಾನ್ ಲಸ್ಸಿ ತೆ ಚ ಅಂಬ್ರಿ ಅನಾರ್ಕಲಿ ದೈನ್ ಶನಾನ್ ಜೆಹ್ಲುಂ ದೇ ಪುಲ್ ತೇ ಮೊಬೈಲ್ ಟೆಲಿಫೋನ್ == ಉರ್ದು ಗ್ರಂಥಗಳು == ಗುಂಚ ಫಿರ್ ಲಗಾ ಕಿಲ್ ನೇ ಶಾಕ್-ಇ-ತಬಸುಮ್ ಮೈಲಿ ಮೈಲಿ ದಾವ್ಪ್ ಎಕ್ ದರೀಚ ಎಕ್ ಚರಗ್ == ಉಲ್ಲೇಖಗಳು ==